Say No To Drugs
![]() |
ಕಡಂಬಾರು ಶಾಲೆಯಲ್ಲಿ ಸ -ಧೈರ್ಯ0 ಸಮಾರೋಪ ಕಾರ್ಯಕ್ರಮ
ಸಮಗ್ರ ಶಿಕ್ಷಾ ಕೇರಳ ಬಿ .ಆರ್ .ಸಿ ಮಂಜೇಶ್ವರ ದ ನೇತೃತ್ವದಲ್ಲಿ ಸರಕಾರಿ ಪ್ರೌಢಶಾಲೆ ಕಡಂಬಾರು ಇಲ್ಲಿ ಹೆಣ್ಣು ಮಕ್ಕಳಿಗಿರುವ 'ಸ-ಧೈರ್ಯಂ' ಕರಾಟೆ ತರಬೇತಿಯ ಸಮಾರೋಪ ಸಭೆ ಜರಗಿತು. ತರಬೇತಿಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನಿತಾ ಕೆ.ಬಿ ಯವರು ವಹಿಸಿದರು. ಮೀ0ಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮ೦ಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ್. ವಿ ಮಾತನಾಡಿದರು. ತರಬೇತಿ ನೀಡಿದಂತಹ ಕುಮಾರಿ ಶೈನಿ ದಾಸ್ ರವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಪಿ. ಟಿ.ಎ ಉಪಾಧ್ಯಕ್ಷರಾದ ಶ್ರೀ ವಿಜಯ ಭಂಡಾರಿ,ಎಂ. ಪಿ. ಟಿ.ಎ ಅಧ್ಯಕ್ಷೆ ಶ್ರೀಮತಿ ರುಕ್ಸಾನ, ಎಸ್.ಎಂ.ಸಿ.ಉಪಾಧ್ಯಕ್ಷರಾದ ಶ್ರೀ ಮೈದೀನ್ , ಸಿ. ಆರ್ ಸಿ ಕೋರ್ಡಿನೇಟರ್ ಶ್ರೀಮತಿ ಮೋಹಿನಿ ಎಂ.ಎಚ್ ಶುಭಾಶಂಸನೆಗೈದರು.ಕಾರ್ಯಕ್ರಮದಲ್ಲಿ ಶ್ರೀ ಮೂಸ ಕುಂಞ ಡಿ.. ಸ್ವಾಗತಿಸಿ, ಶ್ರೀಮತಿ ಗೋಪಿ .ವಿ. ವಂದಿಸಿದರು. ಶ್ರೀ ಇಸ್ಮಾಯಿಲ್ ಮಾಸ್ತರ್ ಕಾರ್ಯಕ್ರಮ ನಿರೂಪಣೆಗೈದರು.
ಕಡಂಬಾರು ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬಿನ ನವೀಕರಣ ಮತ್ತು ಉದ್ಘಾಟನೆ
ಕಡಂಬಾರು ಪ್ರೌಢಶಾಲೆಯಲ್ಲಿ ಎರಡು ಕಂಪ್ಯೂಟರ್ ಲ್ಯಾಬ್ ಗಳ ನವೀಕರಣ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.ಶಾಲಾ ಅಧ್ಯಾಪಕರು ಸಿಬ್ಬಂದಿ ವರ್ಗದವರು ಮತ್ತು ನಿವೃತ್ತ ಅಧ್ಯಾಪಕರ ಸಹಾಯ ಸಹಕಾರದಿಂದ ಎರಡು ಲ್ಯಾಬ್ ಗಳ ನವೀಕರಣ ಚಟುವಟಿಕೆ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ ಟೀಚರ್ ವಹಿಸಿದರು .ಪ್ರೌಢಶಾಲೆಯ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ನಂದಿಕೇಶನ್ .ಎನ್ ಉದ್ಘಾಟಿಸಿದರು. ಪ್ರೈಮರಿ ವಿಭಾಗದ ಕಂಪ್ಯೂಟರ್ ಲ್ಯಾಬಿನ ಉದ್ಘಾಟನೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ದಿನೇಶ್ ವಿ ನೆರವೇರಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಶಿಕ್ಷಕ ಪುರಸ್ಕಾರ ವಿಜೇತ ಶ್ರೀ ನಾರಾಯಣ ದೇಲಂಪಾಡಿ ಸರ್ ಭಾಗವಹಿಸಿ ಮಾತನಾಡಿದರು. ಪಿಟಿಎ ಅಧ್ಯಕ್ಷರಾದ ಶ್ರೀ ಅಬ್ದುಲ್ ಲತೀಫ್, ಎಸ್ಎಂಸಿ ಅಧ್ಯಕ್ಷರಾದ ಶ್ರೀ ಮುತ್ತಲಿಬ್. ಎಂ ಪಿ ಟಿ ಎ ಅಧ್ಯಕ್ಷೆ ಶ್ರೀಮತಿ ರುಕ್ಸಾನ ಅಶ್ರಫ್,ನಿವೃತ್ತ ಅಧ್ಯಾಪಕರಾದ ಶ್ರೀ ವಿಜಯಕುಮಾರ್. ಎ. ,ಹಿರಿಯ ಅಧ್ಯಾಪಕಿ ಶ್ರೀಮತಿ ಕನಕ೦ ಕೆ .ಎಂ , ಶ್ರೀ ಮೂಸಕುಂಞ .ಡಿ. ಶುಭಾಶಂಸನೆಗೈದರು. ಸಭೆಯಲ್ಲಿ ಅಧ್ಯಾಪಕರಾದ ಶ್ರೀ ಧರ್ಮಾನಂದ್ ಕುರುಪ್ ಸ್ವಾಗತಿಸಿ, ಅಧ್ಯಾಪಕರಾದ ಶ್ರೀ ನಯನ ಪ್ರಸಾದ್ ಎಚ್. ಟಿ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಇಸ್ಮಾಯಿಲ್ ಮಾಸ್ತರ್ ನಡೆಸಿದರು.
കടമ്പാർ സ്കൂളിൽ കമ്പ്യൂട്ടർ ലാബിൻറെ നവീകരണവും ഉദ്ഘാടനവും നടന്നു
സർക്കാർ ഹൈസ്കൂൾ കടമ്പാർ ഇവിടെ കമ്പ്യൂട്ടർ ലാബിനെറ നവീകരണം ഉദ്ഘാടനം നടന്നു സ്കൂൾ അധ്യാപകരുടെ , അനഅധ്യാപകരുടെ, റിട്ടർഡ് അധ്യാപകരുടെ സഹായത്തോടെ രണ്ട് കമ്പ്യൂട്ടർ ലാബുകളുടെ നവീകരണ പ്രവർത്തനം നടന്നു. പരിപാടിയുടെ അദ്ധ്യക്ഷസ്ഥാനം അലങ്കരിച്ചത് സ്കൂൾ ഹെഡ്മിസ്ട്രസ് ശ്രീമതി സുനിത കെ ബി ഇവർകളാണ് .ഹൈസ്കൂൾ ലാബ് ഉദ്ഘാടനം ചെയ്തത് കാസർഗോഡ് ജില്ലാ വിദ്യാഭ്യാസ ഓഫീസർ ശ്രീ നന്ദികേശൻ .എൻ .സർ.പ്രൈമറി വിഭാഗം ലാബ് ഉദ്ഘാടനം നടത്തിയത് ഉപജില്ലാ വിദ്യാഭ്യാസ ഓഫീസർ ശ്രീ ദിനേശ് വി സർ അവർകളാണ് മുഖ്യാതിഥിയായി എസ് എസ് കെ കെ പ്രോഗ്രാം ഓഫീസർ സംസ്ഥാന അധ്യാപക അവാർഡ് ജേതാവ് ശ്രീ നാരായണ ദേലംപാടി സംസാരിച്ചു. വേദിയിൽ പി ടി എ അധ്യക്ഷൻ ശ്രീ അബ്ദുൽ ലത്തീഫ് എസ് എം സി ചെയർമാൻ ശ്രീ മുത്തലിബ് .എം പി ടി എ പ്രസിഡണ്ട് ശ്രീമതി റുക്ക്ഷാന അഷ്റഫ്. റിട്ടേഡ് അദ്ധ്യാപകൻ ശ്രീ വിജയകുമാർ.സീനിയർ അധ്യാപിക ശ്രീമതി കനകം കെഎം .ശ്രീ മൂസാ കുഞ്ഞി ഡീ ആശംസ അറിയിച്ചു പരിപാടിയിലേക്ക് അ ശ്രീ ദർമാനന്ദ് കുറുപ്പ് സ്വാഗതവും ശ്രീ നയന പ്രസാദ് നന്ദി പറഞ്ഞു .ആഖ്യാതാവ് ശ്രീ ഇസ്മയിൽ മാസ്റ്റർ പരിപാടി അവതരിപ്പിച്ചു.
![]() |
ಒಂದನೇ ತರಗತಿಗೆ ಸೇರ್ಪಡೆಗೊಂಡ ಮಕ್ಕಳಿಗೆ ಕಲಿಕೋಪಕರಣ ಗಳನ್ನು ನೀಡಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ ಕೆ ಬಿ ಅವರು ನಿರ್ವಹಿಸಿದರು. ಉದ್ಘಾಟನೆಯನ್ನು ಮಿಂಜ ಗ್ರಾಮ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ನೆರವೇರಿಸಿದರು.
ಸಭೆಯಲ್ಲಿ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ರಾಮಚಂದ್ರ ರಾವ್ ರವರ ನೇತೃತ್ವದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು ಹರೀಶ್ ಶೆಟ್ಟಿ ಕಡಂಬಾರು ಹಾಗೂ ಸಂಘ-ಸಂಸ್ಥೆಯವರ ವತಿಯಿಂದ ಒಂದನೇ ತರಗತಿಗೆ ಸೇರ್ಪಡೆಗೊಂಡ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡಲಾಯಿತು ಸಭೆಯಲ್ಲಿ ಮುಸ್ತಫ ಕಡಂಬಾರು ಪಿ ಟಿ ಎ ಅಧ್ಯಕ್ಷರಾದ ಶ್ರೀ ಅಬ್ದುಲ್ ಲತೀಫ್ ಎಂಪಿ ಟಿ ಎ ಅಧ್ಯಕ್ಷೆ ಶ್ರೀಮತಿ ರುಕ್ಸಾನ ಬಿ ಆರ್ ಸಿ ಕ್ಲಸ್ಟರ್ ಕೋರ್ಡಿನೇಟರ್ ಮೋಹಿನಿ ಯಂ ಎಚ್, ಯದುನಂದನ್ ಆಚಾರ್ಯ ,ಸೌರ ಕಡಂಬಾರು,ಪಿಟಿಎ ಉಪಾಧ್ಯಕ್ಷ ಮೊದೀನ್ ಕುಂಞಿ,ನಿವೃತ್ತ ಅಧ್ಯಾಪಕ ಶ್ರೀ ವಿಜಯ್ ಕುಮಾರ್,ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಅಧ್ಯಾಪಕ ಸಿಬ್ಬಂದಿ ಕಾರ್ಯದರ್ಶಿ ಶ್ರೀ ಇಸ್ಮಾಯಿಲ್ ಎಂ ಸ್ವಾಗತಿಸಿ, ಹಿರಿಯ ಅಧ್ಯಾಪಕರಾದ ಶ್ರೀ ಮೂಸ ಕುಂಞ ಡಿ ವಂದಿಸಿದರು.
കടമ്പാർ ഹൈസ്കൂളിൽ പ്രവേശനോത്സവം നടന്നു.
ഒന്നാം ക്ലാസിലേക്ക് പുതിയതായി ചേർന്ന കുട്ടികളെ ബലൂൺ , പൂവ് ,അതേപോലെ പഠനോപകരണങ്ങൾ നല്കി അവരെ സ്വാഗതം ചെയ്തു.
പരിപാടിയുടെ അദ്ധ്യക്ഷത സ്കൂൾ ഹെഡ്മിസ്ട്രസ് ശ്രീമതി സുനിത കെ ബി വഹിച്ചു.
പരിപാടിയുടെ ഉദ്ഘാടനം മീഞ്ച ഗ്രാമപഞ്ചായത്ത് പ്രസിഡണ്ട് ശ്രീമതി സുന്ദരി ആർ ഷെട്ടി നിർവഹിച്ചു ചു പരിപാടിയിൽ ശ്രീ രാമചന്ദ്ര റാവു സ്കൂളിലെ എല്ലാ കുട്ടികൾക്കും മധുരം വിതരണം ചെയ്തു.
ഹരീഷ് ഷെട്ടി കടമ്പാർ ഇവരുടെ സംഘടന യുടെ നേതൃത്വത്തിൽ ഒന്നാം ക്ലാസിലെ കുട്ടികൾക്ക് അ പഠനസാമഗ്രികൾ കൾ വിതരണം ചെയ്തു പരിപാടിയിൽ മുസ്തഫ കടമ്പാർ , പി ടി എ അധ്യക്ഷൻ ശ്രീ അബ്ദുൽ ലത്തീഫ് , എം പി ടി എ അധ്യക്ഷ റുക്സാന, യദുനന്ദന ആചാര്യ. സുഹ്റ കടമ്പാർ, മൈതീൻ കുഞ്ഞ്. റിറ്റഡ് അധ്യാപകൻ ശ്രീ വിജയകുമാർ ബി ആർ സി .സി കോഡിനേറ്റർ മോഹിനി എംഎച്ച് പരിപാടിയിൽ സംബന്ധിച്ചു . സ്റ്റാഫ് സെക്രട്ടറി ശ്രീ ഇസ്മായിൽ മാസ്റ്റർ സ്വാഗതവും ,സീനിയർ അധ്യാപകൻ ശ്രീ മൂസ കുഞ്ഞി ഡി നന്ദി അറിയിച്ചു.
ಸರಕಾರಿ ಪ್ರೌಢ ಶಾಲೆ ಕಡಂಬಾರಿನಲ್ಲಿ ಮೊಬೈಲ್ ಚಾಲೆಂಜ್
ಸರಕಾರಿ ಪ್ರೌಢಶಾಲೆ ಕಡಂಬಾರು ಇಲ್ಲಿ ಆನ್ಲೈನ್ ತರಗತಿಗಳನ್ನು ವೀಕ್ಷಿಸಲು ಸೌಕರ್ಯವಿಲ್ಲದ ತೀರಾ ಬಡಕುಟುಂಬದ ವಿದ್ಯಾರ್ಥಿಗಳಿಗೆ ಮೊಬೈಲ್ ಚಾಲೆಂಜ್ ನ ಭಾಗವಾಗಿ ವಿದ್ಯಾರ್ಥಿಗಳಿಗೆ ಮೊಬೈಲ್ ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ ಮತ್ತು ಕುಟುಂಬದವರು ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ರಾದ ಶ್ರೀ ಶಿವಕುಮಾರ ಕೆ ಕೊಡುಗೆಯಿಂದ ಆನ್ಲೈನ್ ತರಗತಿ ವೀಕ್ಷಿಸಲು ಸಹಾಯಕ ವಾಗುವಂತೆ ಮೊಬೈಲ್ ಗಳನ್ನು ಒದಗಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ಯವರು ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ವಹಿಸಿದರು. ಶಾಲಾ ಶತಮಾನೋತ್ಸವ ಸಮಿತಿ ಸಂಚಾಲಕ ಶ್ರೀ ರಾಮಚಂದ್ರ ರಾವ್ ಶುಭಾಶಂಸನೆಗೈದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ ಶಾಲಾ ಮಾತನಾಡಿ ಅಭಿವೃದ್ಧಿ ಗೋಸ್ಕರ ಎಲ್ಲರೂ ಕೈಜೋಡಿಸಬೇಕು ನಿಮ್ಮೆಲ್ಲರ ಸಹಕಾರವಿದ್ದಲ್ಲಿ ಇನ್ನಷ್ಟು ಮಕ್ಕಳಿಗೆ ಕಲಿಕಾ ಸೌಕರ್ಯವನ್ನು ಒದಗಿಸಬಹುದು ಎಂದರು.
ಎಸ್.ಎಂ.ಸಿ ಅಧ್ಯಕ್ಷರಾದ ಶ್ರೀ ಯದುನಂದನ ಆಚಾರ್ಯ , ಪಿ.ಟಿ. ಎ ಅಧ್ಯಕ್ಷರಾದ ಶ್ರೀ ಮುತ್ತಲೀಬ್ ಕೆದುಂಬಾಡಿ, ಮುಸ್ತಫಾ ಕಡಂಬಾರು, ಎಂ. ಪಿ.ಟಿ. ಎ ಅಧ್ಯಕ್ಷೆ ಶ್ರೀಮತಿ ಝೌರ ಕಡಂಬಾರು, ನಿವೃತ್ತ ಅಧ್ಯಾಪಕ ಶ್ರೀ ವಿಜಯಕುಮಾರ್ ಎ ಶುಭಹಾರೈಸಿದರು. ಹಿರಿಯ ಅಧ್ಯಾಪಕರಾದ ಶ್ರೀ ಮೂಸಾ ಕುಂಞಿ.ಡಿರವರು ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ಸಭೆಯಲ್ಲಿ ಸ್ಟಾಫ್ ಸೆಕ್ರೆಟರಿ ಶ್ರೀ ಇಸ್ಮಾಯಿಲ್ ಮಾಸ್ಟರ್ ಸ್ವಾಗತಿಸಿ , ಹಿರಿಯ ಅಧ್ಯಾಪಿಕೆ ಶ್ರೀಮತಿ ಕನಕಂ ಟೀಚರ್ ವಂದಿಸಿದರು.
ഗവൺമെന്റ് ഹൈസ്കൂൾ കടമ്പാർ ഓൺലൈൻ സംവിധനം ഇല്ലാത്ത പാവപെട്ട കുട്ടികൾക്ക് മൊബൈൽ ഫോൺ ചലഞ്ച്
ഗവൺമെൻ്റ് ഹൈസ്കൂൾ കടബാരിൽ പാവപ്പെട്ട ഓൺലൈൻ സേവനങ്ങൾ ഇല്ലാത്ത കുട്ടികൾക്ക് സ്മാർട്ട് ഫോൺ സ്കൂൾ എച്ച്.എം സുനിതയും കുടുംബംവും ,മുൻ ഹെഡ് മാസ്റ്റർ ശിവകുമാർ ബല്ലാൾ സ്പോൺസർ ചെയ്തു.
പരിപാടിയുടെ ഉദ്ഘാടനം കാസർകോട് ജില്ലാ പഞ്ചായത്ത് അംഗം ശ്രീമതി.കമലാക്ഷി നിർവഹിച്ചു.
മീംജ ഗ്രാമപഞ്ചായത്ത് പ്രസിഡന്റ് ശ്രീമതി സുന്ദരി ആർ ശെറ്റി.അധ്യക്ഷത വഹിച്ചു. ഹെച്ച്..എം സുനിത സ്കൂളിന്റെ ഉന്നമനത്തിനായി എല്ലാവരും സഹകരിക്കുക.. നിങ്ങളുടെ കൂടെ എപ്പോഴും ഞാൻ ഉണ്ട്.. എന്ന് ഉറപ്പു നൽകി.. ശ്രീ മൂസക്കുഞി.ഡി..ആമുഖം പ്രസംഗിച്ചു.. ശ്രീ രാമചന്ദ്ര രാവ് , എസ്.എം സി. പ്രസിഡന്റ് ശ്രീ യധുനന്ധന ആചാര്യ ,പി.ട.എ.
പ്രസിഡന്റ മുത്തലിബ് കെദുംബാഡി.
എം.പി.ടി.എ..സുഹറ കടംബാർ , വിജയകുമാർ, എസ് എം സി വൈസ് പ്രസിഡന്റ് ശശി വിലാസ് ആശംസകൾ നേരുന്നു..സ്ടാഫ് സെക്രട്ടറി ഇസ്മായിൽ മാസ്റ്റർ സ്വാഗതവും.. സീനിയർ അധ്യാപിക കനകം ടീച്ചർ നന്ദിയും പറഞ്ഞു.
ಕಡಂಬಾರು ಶಾಲೆಯಲ್ಲಿ ಕಲಿಕೋಪಕರಣ ವಿತರಣೆ
ಕಡಂಬಾರು ಸರಕಾರಿ ಪ್ರೌಢ ಶಾಲೆಯಲ್ಲಿ 1 ಮತ್ತು 2 ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಕಲಿಕೋಪಕರಣ ವಿತರಣಾ ಸಮಾರಂಭ ಜರಗಿತು. ಸುಮಾರು 100 ಮಕ್ಕಳಿಗೆ ಶಾಲಾ ಶತಮಾನೋತ್ಸವ ಸಮಿತಿಯ ಕನ್ವೀನರ್ ಆದ ಶ್ರೀ ರಾಮಚಂದ್ರ ರಾವ್ ಹಾಗೂ ಕುಟುಂಬಸ್ಥರ ಕೊಡುಗೆಯಿಂದ ನೀಡಲಾದ ಕಲಿಕೋಪಕರಣಗಳ ವಿತರಣೆಯ ಉದ್ಘಾಟನೆ ಯನ್ನು ಸಾಂಕೇತಿಕವಾಗಿ ಸಮಾರಂಭದಲ್ಲಿ ನೆರವೇರಿಸಲಾಯಿತು. ಸಮಾರಂಭದ ಉದ್ಘಾಟನೆ ಯನ್ನು ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಶ್ರೀಮತಿ ಸುಂದರಿ ಆರ್ ಶೆಟ್ಟಿ ನಿರ್ವಹಿಸಿದರು. ಮುಖ್ಯ ಅತಿಥಿಯಾದ ದಾನಿಗಳಾದ ಶ್ರೀ ರಾಮಚಂದ್ರ ರಾವ್ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ ಕೆ.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್.ಎಂ.ಸಿ ಚೇರ್ಮನ್ ಶ್ರೀ ಯದುನಂದನ ಆಚಾರ್ಯ ವಹಿಸಿದರು. ಪಿ. ಟಿ. ಎ ಅಧ್ಯಕ್ಷರಾದ ಶ್ರೀ ಮುತ್ತಲೀಬ್, ಮುಹಮ್ಮದ್ ಮುಸ್ತಫ, ನಿವೃತ್ತ ಅಧ್ಯಾಪಕ ಶ್ರೀ ವಿಜಯ ಕುಮಾರ್ ಎ , ಎಂ. ಪಿ. ಟಿ.ಎ ಅಧ್ಯಕ್ಷೆ ಝೌರ ಕಡಂಬಾರು, ಹಿರಿಯ ಅಧ್ಯಾಪಕರಾದ ಶ್ರೀ ಮೂಸಾ ಕುಂಞಿ.ಡಿ, ಶ್ರೀಮತಿ ಕನಕಂ ಟೀಚರ್ ಶುಭಾಶಂಸನೆಗೈದರು. ಸಭೆಯಲ್ಲಿ ಸ್ಟಾಫ್ ಸೆಕ್ರೆಟರಿ ಶ್ರೀ ಇಸ್ಮಾಯಿಲ್ ಎಂ ಸ್ವಾಗತಿಸಿ, ಶ್ರೀ ನಯನ ಪ್ರಸಾದ್ ಯಚ್.ಟಿ ವಂದಿಸಿದರು.
കടംബാർ സർക്കാര് ഹൈസ്കൂളിൽ പഠനോപകരണ വിതരണം
കടംബാര് സർക്കാർ ഹൈസ്കൂളിൽ ഒന്നും രണ്ടും ക്ലാസുകളിൽ പഠിക്കുന്ന കുട്ടികൾക്കായി പഠനോപകരണ സാമാഗ്രികളുടെ കിറ്റ് വിതരണം നടന്നു. നൂറോളം കുട്ടികൾക്കായി സ്കൂൾ സെന്റിനറി കമ്മിറ്റി കൺവീനർ ശ്രീരാമചന്ദ്ര റാവും കുടുംബാംഗങ്ങൾ സംഭാവന ചെയ്ത പഠനോപകരണങ്ങൾ ഉൾകൊള്ളുന്ന കിറ്റ് വിതരണം ചെയ്തു . മീഞ്ജ ഗ്രാമപഞ്ചായത്ത് പ്രസിഡന്റ് ശ്രീമതി സുന്ദരി ആർ ഷെട്ടിയാണ് പരിപാടി ഔപചാരികമായി ഉദ്ഘാടനം ചെയ്തു. മുഖ്യാതിഥി ശ്രീ രാമചന്ദ്ര റാവു സംസാരിച്ചു. സ്കൂൾ ഹെഡ്മിസ്ട്രസ്സ് ശ്രീമതി സുനിതാ കെ.ബി ആമുഖമായി സംസാരിച്ചു. യോഗത്തിൽ സ്കൂൾ എസ്.എം.സി ചെയർമാൻ യാദുനന്ദന ആചാര്യ അധ്യക്ഷത വഹിച്ചു. പി. ടി. എ അധ്യക്ഷൻ ശ്രീ മുത്തലീബ്, മുഹമ്മദ് മുസ്തഫ, റിട്ടയേർഡ് അധ്യാപകൻ ശ്രീ വിജയ് കുമാർ എ, എം. പി. ടി.എ ചെയർപേഴ്സൺ സുഹ്റ കടമ്പാരു, സീനിയർ അധ്യാപകരായ ശ്രീ മൂസ കുഞ്ഞി ഡി, ശ്രീമതി കനംകം ടീച്ചർ എന്നിവർ ആശംസ സമർപിച്ചു. സദസ്സിനെ സ്റ്റാഫ് സെക്രട്ടറി ശ്രീ ഇസ്മായിൽ എം സ്വാഗതം ചെയ്തു.ശ്രീ നയന പ്രസാദ് യച്ച്. ടി നന്ദി സമർപിച്ചു.